ಬುಧವಾರ, ಮೇ 27, 2020
ಕಾಮರ್ಸ್_ಕವಿತೆಗಳು_4
ಕಾಮರ್ಸ್_ಕವಿತೆಗಳು_3
ಕಾಮರ್ಸ್_ಕವಿತೆಗಳು_2
ಕಾಮರ್ಸ್_ಕವಿತೆಗಳು_1
ಭಾನುವಾರ, ಮೇ 24, 2020
ರಾತ್ರಿ...
ಶುಕ್ರವಾರ, ಮೇ 15, 2020
ಕಾರ್ಮೋಡ
ಭಾನುವಾರ, ಮೇ 10, 2020
ದೀಪ...
ಭಾನುವಾರ, ಸೆಪ್ಟೆಂಬರ್ 22, 2019
ಅನಿಸಿದ್ದು ಅನಿಸಿದ ಹಾಗೆ..!!
ಗುರುವಾರ, ಆಗಸ್ಟ್ 15, 2019
Mission Mangal...
ಸೋಮವಾರ, ಏಪ್ರಿಲ್ 8, 2019
ಹಾಗೇ ಸುಮ್ಮನೇ...
ನನ್ನೀ ಬದುಕಲ್ಲಿ ನೀನೊಂದು ಮುದ್ದಾದ ಅಧ್ಯಾಯ
ನಿನ್ನ ಸೇರದೇ ಚಡಪಡಿಸೋ ನಾನೀಗ ನಿರುಪಾಯ
ಕನಸ ಜಾತ್ರೆಯಲಿ ನೀ ಮಾಯಕದ ಗಡಿಯಾರ
ಸಮಯ ಸರಿಯೋ ಮುನ್ನ ಓಡದಿರು ಬಲು ದೂರ...
ನನ್ನೀ ಬದುಕಲ್ಲಿ ನೀನೊಂದು ಮುದ್ದಾದ ಅಧ್ಯಾಯ.....
ನಾ ಅಲೆವಾ ನೆನಪ ಬೀದಿಗಳಲಿ ನಿನ್ನದೇ ಗುಣಗಾನ
ನಿನಗೇಕೆ ಕೇಳುತಿಲ್ಲ ಈ ಅನುರಾಗದ ಸಂಧಾನ
ಕಾರಣವ ಹೇಳದೇ ಸುಮ್ಮನೆ ನೀ ದೂರಾದರೆ ಹೀಗೆ
ನನ್ನ ಪರಿಧಿಯ ಮೀರಿ ಹೇಗಂತ ನಾ ಬದುಕಿರಲಿ ಹೇಳೆ...
ನನ್ನೀ ಬದುಕಲ್ಲಿ ನೀನೊಂದು ಮುದ್ದಾದ ಅಧ್ಯಾಯ....
ಬದುಕಿಗೆ ಬಣ್ಣ ತಂದೋಳು ನೀನೇ
ಮಧ್ಯ ದಾರಿಲಿ ಕೈ ಬಿಟ್ಟೋಳು ನೀನೇ
ಹುಚ್ಚು ಆಸೆಗೆ ಹಕ್ಕಿ ಪುಕ್ಕ ಕೊಟ್ಟೋಳು ನೀನೇ
ಕೊಟ್ಟ ಮಾತನು ಆರಾಮಾಗಿ ಮರೆತೋಳು ನೀನೇ
ನನ್ನೆಲ್ಲಾ ಹಸಿ ಕನವರಿಕೆಗಳ ರೂವಾರಿಯು ನೀನೇ
ಸತ್ತ ಕನಸುಗಳ ಸಮಾಧಿಗೆ ಒಡತಿಯೂ ನೀನೇ
ಹೋಗುವ ಮುನ್ನ ನೀನಿಲ್ಲದೇ ಬದುಕೋ ದಾರಿಯ ಹೇಳೇ....
ನನ್ನೀ ಬದುಕಲ್ಲಿ ನೀನೊಂದು ಮುದ್ದಾದ ಅಧ್ಯಾಯ....
ಈ ಹೃದಯಕೆ ನೀಡದೆ ಬಂದೆಯಾ ಪ್ರೀತಿಯ ತೆರಿಗೆ
ಹೋಗೋ ಮುನ್ನ ಅದರಲಿ ಬರೀ ನೋವುಗಳ ಹೆರಿಗೆ
ಮೂರ್ಖ ಮನಸು ಮತ್ತೆ ಓಡಿದೆ ನಿನ್ನದೇ ಊರಿಗೆ
ಹಿಂತಿರುಗಿ ಬಂದುಬಿಡು ಒಮ್ಮೆ ಈ ಪ್ರೇಮಿಯ ಕರೆಗೆ...
ನನ್ನೀ ಬದುಕಲ್ಲಿ ನೀನೊಂದು ಮುದ್ದಾದ ಅಧ್ಯಾಯ...
-R.R.B.
ಯುಗಾದಿ
ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...
-
ಸುತ್ತ ಕತ್ತಲಾವರಿಸಿರೋ ವೇಳೆ ಜೀವಸೂರ್ಯ ಅಸ್ತಮಿಸೋ ಹೊತ್ತು ಒಲೆಯ ಮೇಲೆ ಉರಿವ ಬೆಂಕಿ ಧಗಿಸುತಿಹ ಜ್ವಾಲೆ ಮನದೊಳಗೂ.... ಮೊದಲ ಚಹ ಮಾಡಿದಾ ಅನುಭವ ಪ್ರಥಮ ಪ್ರೇಮದ ಸವ...
-
ಶಿಶಿರದ ಕಹಿನೆನಪ ಅಳಿಸಿ ಹೊಸ ಹರುಷದ ಹೊಳೆಯ ಹರಿಸಿ ಮತ್ತೆ ಬಂತು ಯುಗಾದಿ - ವಸಂತದ ಆಗಮನದಿ... ಮನೆಗೂ-ಮನಕೂ ಕಟ್ಟುವ ಚಿಗುರ ತೋರಣ ಸಂಭ್ರಮದಿ ಕಲಸುವ - ಹೋಳಿಗೆಯ ಸಿಹಿ ಹೂ...
-
A sunny morning. I woke up with a smile, thinking that it will be a memorable day in my life. I started dreaming...