ಒಂದು ರಾಕೆಟ್ ಯಶಸ್ವಿಯಾಗಿ ಉಡಾವಣೆಯಾದಾಗ ಹೇಳಲಾಗದಷ್ಟು ಖುಷಿ ಪಡುತ್ತೇವೆ, ಕಾಶ್ಮೀರದ ಗಡಿಯಲ್ಲೆಲ್ಲೋ ಯುದ್ಧವಾಗಿ ಭಾರತೀಯ ಸೈನ್ಯ ಗೆದ್ದಾಗ ನಾವೇ ಏನೋ ಸಾಧಿಸಿದಂತೆ ಧನ್ಯತಾಭಾವ ಆವರಿಸುತ್ತದೆ, ಅಷ್ಟೇ ಯಾಕೆ, ಒಂದು ಕ್ರಿಕೆಟ್ World cup match ಸಾಕು ನಮ್ಮೊಳಗಿನ ದೇಶಭಕ್ತಿ ಎಚ್ಚರಗೊಳ್ಳುವುದಕ್ಕೆ !! ಆದರೆ ಅದೆಲ್ಲದರ ಹಿಂದಿನ ಪರಿಶ್ರಮ, ನಡೆದು ಬಂದ ದಾರಿಯ ಬಗ್ಗೆ ನಮ್ಮಂಥ ಅನೇಕ ಸಾಮಾನ್ಯ ಜನರಿಗೆ ಅಷ್ಟಾಗಿ ತಿಳಿದಿರುವುದಿಲ್ಲ... "ಚಲನಚಿತ್ರ" ಸಂದೇಶಗಳನ್ನು, ಮಾಹಿತಿಗಳನ್ನು ಹಂಚಲು ಒಂದು ಸಶಕ್ತ ಮಾಧ್ಯಮ. ಅದನ್ನು ಬಳಸಿ ISROದ Mars Mission ಬಗ್ಗೆ ಜನತೆಗೆ ತಿಳಿಸುವ ಪ್ರಯತ್ನ ನಿಜಕ್ಕೂ ಅಭಿನಂದನಾರ್ಹ !! 2 ಗಂಟೆ 13 ನಿಮಿಷಗಳ ಚಿತ್ರ ಎಲ್ಲಿಯೂ "ಬೋರ್" ಎನಿಸಲಿಲ್ಲ, ಬದಲಾಗಿ ದೇಶಭಕ್ತಿಯ ಗಾಢಭಾವ ಮೂಡಿಸಿತು, ಭಾರತದ ಬಗ್ಗೆ ಹೆಮ್ಮೆ ಹೆಚ್ಚಿಸಿತು, ತಾಯ್ನಾಡಿನ ಬಗ್ಗೆ ಪ್ರೀತಿ ಕೂಡ !!
ಆದರೆ ತಾಪ್ಸೀ ಪನ್ನು ಅವರ ಒಂದು ದೃಶ್ಯ ಹಲವು ವಿವಾದಗಳ ಸೃಷ್ಟಿಗೆ ಕಾರಣವಾಗಿದ್ದು ವಿಷಾದನೀಯ. ಒಂದು ಗಂಭೀರ ಚಿತ್ರದಲ್ಲಿ ತಮಾಷೆಯ ತುಣುಕುಗಳ ಜೋಡಿಸಲು ಹೋಗಿ ಸ್ವಲ್ಪ ಎಡವಿದ್ದು ಕಾರಣವಿರಬಹುದು. ಹಾಸ್ಯದ ಉದ್ದೇಶ ಸರಿಯಿದ್ದರೂ ಹಾಸ್ಯಕ್ಕೆ ಬಳಸಿಕೊಂಡ ವಿಷಯ ಸರಿ ಇರಲಿಲ್ಲವೆನೋ...
ಅದೆಲ್ಲ ಪಕ್ಕಕ್ಕಿಟ್ಟರೆ, ಒಂದು ರಾಕೆಟ್ ಇರಲಿ, ಜನಮನ್ನಣೆಗಳಿಸುವಂಥ ಚಲನಚಿತ್ರವೇ ಇರಲಿ ಅದನ್ನು ಯಶಸ್ವಿಯಾಗಿ ಪೂರ್ತಿಗೊಳಿಸುವುದೇ ಒಂದು ತಪಸ್ಸು, ಅದೇ ಒಂದು ಸಾಧನೆ!! ಮಂಗಳಯಾನದ ಯಶಸ್ಸಿಗೆ ದುಡಿದ ಎಲ್ಲ ವಿಜ್ಞಾನಿಗಳ ಪರಿಶ್ರಮವನ್ನು ಗೌರವಿಸೋಣ. ಜೊತೆಗೆ ಅವರ ಪರಿಶ್ರಮ ಬೆಳಕಿಗೆ ಬರುವಂತೆ ಮಾಡಿದ ಚಿತ್ರವೃಂದಕ್ಕೂ ಕೂಡ.. ಲೈಟ್ ಬಾಯ್, ಆರ್ಟ್ ಡಿಪಾರ್ಟ್ಮೆಂಟಿಂದ ಹಿಡಿದು, ಚಿತ್ರ ನಿರ್ದೇಶನದವರೆಗೆ ಶ್ರಮಿಸಿದ ಎಲ್ಲರ ಬೆವರಹನಿಗೂ ಗೌರವ ನೀಡೋಣ...
The Ghazi Attack, Paramanu, Uri, Mission Mangal ಇಂತದ್ದೇ ಇನ್ನೂ ಹಲವಾರು ಚಿತ್ರಗಳು ಬರಲಿ, ನಮ್ಮ ದೇಶದ ಹಿರಿಮೆ ಎಲ್ಲರಿಗೂ ತಿಳಿಯುವಂತಾಗಲಿ... ಒಟ್ಟಿನಲ್ಲಿ ಸ್ವಾತಂತ್ರ್ಯ ದಿನವನ್ನು Mission Mangal ನೋಡುವ ಮೂಲಕ ಆಚರಿಸಿದ ಖುಷಿ ನನ್ನ ಪಾಲಿಗೆ...😍😍
- R. R. B.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ