ಬಳಲಿ ಬೆಂಡಾಗಿರುವೆ
ಆಸೆಗಳು ಕಮರುತ್ತಿವೆ
ಕನಸುಗಳೆಲ್ಲ ಮಣ್ಣಾಗಿ
ಅದರ ಮೇಲೆ ಹೊಸ ಸಸಿ
ತಳಿರೊಡೆಯುತ್ತಲಿದೆ...
ಗತಕಾಲದ ನೋವುಗಳು
ಪುನಃ ಮರುಕಳಿಸುತಿವೆ
ಮನ ಮುದುಡುತಲಿದೆ...
ಹೃದಯ ಬೃಂದಾವನದಿ
ನೀರಿಲ್ಲ,
ಅರಳಿದ ಸುಮವಿಲ್ಲ
ಎಲ್ಲಾ ಬರೀ ಒಣಗಿದೆಲೆಗಳು
ಬಾಡಿಹೋದ ಬಳ್ಳಿಗಳು...
ನೀರೆರೆಯುವರಾರು?
ಅದ ಚಿಗುರಿಸುವರಾರು?..
ಕಾದು ಕಾದು ಬೆಂದಿರುವೆ
ತಾಪವ ತಾಳಲಾಗದೆ...
ಮನದ ಬೇಗೆ ತಣಿವುದೆಂತು?
ಎಲ್ಲಿ ಅಕ್ಕರೆಯ ಸಾಂತ್ವನ?..
ಅತ್ಯಗತ್ಯ ಮಾಗ೯ದಶ೯ನ
ಭಾವಗಳಿಗೆ ಸಮಪ೯ಕ ಸ್ಪಂದನ..
ಬಯಕೆಗಳ ಬಾಣೆಲೆಯಲಿ
ಬಳಲಿ ಬೆಂಡಾಗುತಲಿರುವೆ...
- R. R. B.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ