ಫಕ್ಕನೆ ಮೂಡಿ ಮಾಯವಾಯಿತು
ಹಾಗೆಯೇ ಹೃದಯಾಕಾಶದಿ
ಭರವಸೆಯ ಸುಳಿಮಿಂಚು....
ಆ ಮಿಂಚು ಮಾಯವಾದಂತೆ
ಭರವಸೆಯು ಅದೃಶ್ಯವಾಗದಿರಲಿ
ಗಾಡಾಂಧಕಾರದಿ ಬೆಳಕ ನೀಡುವ ಮಿಂಚದು
ಬೇಸತ್ತ ಜೀವನಕೆ ರಸತುಂಬುವ ಮಿಂಚಿದು
ಆತ್ಮವಿಶ್ವಾಸವೆಂಬ ಕೋಲ್ಮಿಂಚು....
ಭಾವಗಳ ವಷ೯ಧಾರೆ ಸುರಿವಾಗ
ಮಾತು ಧ್ವನಿಯಾಗುವ ಮುನ್ನ
ಉದ್ಭವಿಸುವ ಮೌನ - ಮಿಂಚು
ಪ್ರತಿಕ್ಷಣದಿ ಅನುದಿನದಿ ಮನಕೆ
ಸಾಂತ್ವನ ನೀಡುವ ಅಶರೀರ ಶಕ್ತಿಯದು
ಏಕಾಂಗಿತನ ಕಾಡುವಾಗ ಸಂಗಾತಿಯಾಗಿ
ಕತ೯ವ್ಯ, ಹವ್ಯಾಸಗಳ ಹಂಬಲಿಸುತ
ಅಸಂಖ್ಯಾತ ನೋವುಗಳಿದ್ದರೂ
ಇತರರ
ಮೇಲೆ ಅವಲಂಬಿಸದೆ
ಸುಪ್ತವಾಗಿರುವ
ಅಗಾಧ ಸಾಮರ್ಥ್ಯಗಳ
ನೆನಪಿಸುತ್ತ,
ಕ್ರೋಢೀಕರಿಪ ಕಾಂತಿಯದು
ಹಗಲಿನಲಿ ಸಪ್ತಾಶ್ವರೂಢನ ತೀಕ್ಷ್ಣ ಬೆಳಕು
ಇರುಳಿನಲಿ ಶಶಿಗಿಂತ ಪ್ರಖರ ಮಿಂಚಿನ ಬೆಳಕು
ನಶ್ವರವಾದ ಈ ಬಾಳಿಗೆ ಭರವಸೆಯೇ ಬೆಳಕು.
- R. R. B.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ